ಪ್ರಕೃತಿಯ ಮಧ್ಯೆ – ಟ್ರೆಕಿಂಗ್ ಮತ್ತು ಧ್ಯಾನದ ವಿಶಿಷ್ಟ ಅನುಭವ!

ಟ್ರೆಕ್ಕಿಂಗ್ ಎಂದರೆ ಪ್ರಕೃತಿಯ ಮಧ್ಯೆ, ಸಾಮಾನ್ಯವಾಗಿ ಬೆಟ್ಟಗಳು, ಕಾಡುಗಳು ಅಥವಾ ಹಳ್ಳಿ ಪ್ರದೇಶಗಳ ಮೂಲಕ, ಕಾಲ್ನಡಿಗೆಯಲ್ಲಿ ಉದ್ದದ ದೂರ ಪ್ರಯಾಣಿಸುವ ಹೈking ಅಥವಾ ಅನ್ವೇಷಣಾತ್ಮಕ ಚಟುವಟಿಕೆ. ಇದು ಶಾರೀರಿಕ ಸಾಮರ್ಥ್ಯವನ್ನು ಪರೀಕ್ಷಿಸುವದೊಂದಿಗೇ, ಪ್ರಕೃತಿಯ ಸೌಂದರ್ಯವನ್ನು ಆನಂದಿಸುವ ಮನರಂಜನಾ ಪ್ರವಾಸವಾಗಿಯೂ ಪರಿಗಣಿಸಲಾಗುತ್ತದೆ. ಟ್ರೆಕ್ಕಿಂಗ್ ಎಂದರೆ ಪರ್ವತ, ಕಾಡು ಅಥವಾ ಹಳ್ಳಿಯ ಮಾರ್ಗಗಳಲ್ಲಿ ಕಾಲ್ನಡಿಗೆಯ ಮೂಲಕ ಅನುಭವಿಸುವ ದೈಹಿಕ ಹಾಗೂ ಮನಸ್ಸಿನ ಸಾಹಸಯಾತ್ರೆ. ಇನ್ನು ಸ್ವಲ್ಪ ಇತಿಹಾಸ ಕೆದಕಿದರೆ ? […]

“ಆಟೋಮೇಷನ್ ಯುಗದಲ್ಲಿ ಭಾರತೀಯ ಐಟಿ ಯುವಕರ ಪಥ”

Go to IT Youth Section ಇತ್ತೀಚಿಕೆ ಒಂದು ಸಂದರ್ಶನದಲ್ಲಿ ಇನ್ಫೋಸಿಸ್ ಫೌಂಡರ್ ಸದಸ್ಯ ಮೋಹನದಾಸ ಪೈಯವರ ಪ್ರಕಾರ ಐಟಿ ಡಿಮ್ಯಾಂಡ್ ಕಡಿಮೆ ಆಗಿದೆ ಎಂದು ಒಪ್ಪಿಕೊಂಡ್ಡಿದ್ದಾರೆ. ಇದರ ಜೊತೆ ಫ್ರೆಷೆರ್ ಅವರ ಸಂಬಳದ(ಇನೊಫೋಸಿಸ್, ಟಿಸಿಎಸ್ ಸರ್ವಿಸ್ ಸಂಸ್ಥೆಗಳ ಸಂಬಳ, ಬೇರೆ ಸಂಸ್ಥೆಗಳ ಸಂಬಳ ೨೦-೩೦ ಲಕ್ಷ) ವ್ಯತ್ಯಾಸದ ಬಗ್ಗೆ ಬೆಳಕು ಚೆಲ್ಲಿದ್ದಾರೆ. ೨೦೧೧ ರಲ್ಲಿ ೩.೨೫ ಲಕ್ಷ ಇದ್ದ ಸಂಬಳ ಇವತ್ತು ೪ ಲಕ್ಷದ ಆಸುಪಾಸು […]

ಮೆಟ್ರೋ ಹೊತ್ತ ಹಳೆಯ ನೆನಪುಗಳು: ಚಿನ್ನಿ-ದಾಂಡದಿಂದ ಸುಪ್ತ ಮನಸ್ಸಿನವರೆಗೆ”(ಒಂದು ಕಾಲಘಟ್ಟದ ಮನೋಜ್ಞ ಕನ್ನಡಿ)

ಸುಪ್ತ ಮನಸ್ಸಿನ ಶಕ್ತಿ – ನಾವೆನು ನಂಬುತ್ತೇವೋ, ಅದನ್ನೇ ನಾವು ರೂಪಿಸುತ್ತೇವೆ. ಕೆಲವು ದಿನಗಳ ಹಿಂದೆ ನಾನು – “ಸುಪ್ತ ಪ್ರಜ್ಞಾ ಮನಸ್ಸಿನ ಶಕ್ತಿ” ಎಂಬ ಜೋಸೆಫ್ ಮರ್ಫಿಯವರ ಪುಸ್ತಕ ಓದುತ್ತಿದ್ದೆ . ಇನ್ನೂ ಎರಡನೇ ಅಧ್ಯಾಯವಲ್ಲದೆ ಮುಂದೆ ಓದಿಲ್ಲ. ಆದರೆ ಈಗಾಗಲೇ ಕೆಲವೊಂದು ತತ್ವಗಳು ಮನಸ್ಸಿಗೆ ಸ್ಪಷ್ಟವಾಗಿ ತಟ್ಟಿವೆ. ಅವರು ಒಂದು ಗುಟ್ಟು ಬಿಚ್ಚುತ್ತಾರೆ: ನಿಮ್ಮ ಸುಪ್ತ ಮನಸ್ಸು ಹೇಗೆ ಕೆಲಸ ಮಾಡುತ್ತದೆ ಎಂಬ ತಿಳುವಳಿಕೆ […]

ಈ ಚೆಂಡಿನ ಹಿಂದೆ ಆಳವಾದ ಕಥಗಳೇ ಇವೆ! ಯಾವ ಚಂಡು? ಬನ್ನಿ ನೋಡೋಣ?

ನಾನು ಭೀಮಾಶಂಕರ ತೇಲಿ, ನಮ್ಮೂರ ರಾಷ್ಟ್ರೀಯ ಹೆದ್ದಾರಿಯ ೧೩ ಮೇಲೆ ಬರುವ ಸಣ್ಣ ಹಳ್ಳಿ. ಒಂದು ಸುಂದರ ಸೀದಾ ಸಾದಾ ಹಳ್ಳಿ. ರೈತರಿರುವ ಹಳ್ಳಿ. ನಮ್ಮೂರಿನಲ್ಲಿ ಸ್ವಾಭಿಮಾನದಿಂದ ದುಡಿದು ಜೀವನ ಕಟ್ಟಿಕೊಂಡ ಜನರೇ ಜಾಸ್ತಿ! ನಮ್ಮೂರಲ್ಲಿ ಅವಾಗ ಹತ್ತನೆಯ ತರಗತಿವರೆಗೆ ಶಾಲೆ ಇದ್ದುದರಿಂದ, ನಾವೆಲ್ಲರೂ ಅಲ್ಲೇ ಕನ್ನಡ ಮಾಧ್ಯಮದಲ್ಲಿ ಓದುತ್ತಿದ್ದೆವು. ಹಳ್ಳಿಗಳಲ್ಲಿ ಪ್ರಚಲಿತ ಆಟಗಳು ಎಂದರೆ ಕಬಡ್ಡಿ, ಸುರಮೆನೆ. ೧೯೯೦ರ ಆಸುಪಾಸಿನಲ್ಲಿ ಸರಳವಾಗಿ ಎಲ್ಲರೂ ಆಡುವ ಆಟ […]

“ನಿನ್ನ ಓದಿನ ಪಾಠವೇ ನಿನ್ನ ವಿಜಯ ಪಥ!”(“Your Study Path is Your Success Path!”)

ಒಬ್ಬ 10ನೇ ತರಗತಿಯ ವಿದ್ಯಾರ್ಥಿ ಉತ್ತಮವಾಗಿ ಅಭ್ಯಾಸ ಮಾಡಿ ಯಶಸ್ಸು ಸಾಧಿಸಲು, ಪಾಠ್ಯಕ್ರಮವನ್ನು ನಿಖರವಾಗಿ ಅರ್ಥಮಾಡಿಕೊಳ್ಳುವುದು ಹಾಗೂ ಸಮಯವನ್ನು ಸರಿಯಾಗಿ ಬಳಸುವುದು ಅತ್ಯವಶ್ಯಕ. ಕೆಳಗೆ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ವ್ಯಾಸಂಗಕ್ಕೆ ಉಪಯುಕ್ತ ಟಿಪ್ಸ್ ನೀಡಲಾಗಿದೆ: 📌 1. ಸೂಕ್ತವಾದ ಸಮಯಪಟ್ಟಿ ರೂಪಿಸಿಕೊಳ್ಳಿ Make a Proper Timetable ಕನ್ನಡದಲ್ಲಿ: ಪ್ರತಿದಿನದ ಓದಿಗೆ ಸಮಯ ನಿಗದಿಪಡಿಸಿ. ಮುಖ್ಯ ವಿಷಯಗಳಿಗೆ ಹೆಚ್ಚು ಸಮಯ ನೀಡಿರಿ. ವಿಶ್ರಾಂತಿ ಸಮಯವನ್ನೂ ಸೇರಿಸಿ.In […]

೨೦೫೦ ರಲ್ಲಿ ಯುದ್ಧ ಭೀಕರತೆ ಹೇಗಿರಬಹುದು?

ಮೋದಿಯವರು ತಮ್ಮ ಭಾಷಣದಲ್ಲಿ ಪಾಕಿಸ್ತಾನ ಸೈನ್ಯ ಗಡಿಯಲ್ಲಿ ಯುದಕ್ಕೆ ಸಂಪೂರ್ಣ ಸಿದ್ದವಾಗಿ ನಿಂತಿತ್ತು. ಆದರೆ ನಾವು ವಾಯುದಾಳಿ ಮೂಲಕ ಪಾಕಿಸ್ತಾನದ ಅನೇಕ ವಾಯು ನೆಲೆಗಳನ್ನು ದ್ವಂಸ ಮಾಡಿದೆವು. ಇದಕ್ಕೆಲ್ಲ ಕಾರಣವಾಗಿದ್ದು, ಮಿಸೈಲ್ಗಳು. ಆದರೆ ಮಿಸೈಲ್ ಗಳನ್ನು ಹೊಡೆದುರಿಳಿಸುವ ಐಂಟಿ ಡಿಫೆನ್ಸ್ ಸಿಸ್ಟಮ್ ಪಾಕಿಸ್ತಾನದಲ್ಲಿ ಇರಲಿಲ್ಲವೇ? ಇತ್ತು ಅದನ್ನು ಭಾರತದ ವಾಯು ಸೈನ್ಯ ಅದನ್ನು ನಿಷ್ತ್ರೀಯ ಮಾಡಿತ್ತು ಅದಕ್ಕಾಗಿಯೇ ಭಾರತ ಸರಳವಾಗಿ ದಾಳಿ ಮಾಡಿತ್ತು. ವಾಯು ಸೇನಾ ಮುಖ್ಯಸ್ಥ […]

ಭಾರತಕ್ಕೆ ‘ಸ್ಪಷ್ಟ ಜಯ’: ಪಾಶ್ಚಾತ್ಯ ರಾಷ್ಟ್ರಗಳು ಸಂಘರ್ಷವನ್ನು ತಪ್ಪಾಗಿ ಅರ್ಥೈಸಿಕೊಂಡವು..

ಕನ್ನಡಕ್ಕೆ ಭಾಷಾಂತರ – Bhimashankar Teli ಇತ್ತೀಚಿನ ಭಾರತ-ಪಾಕಿಸ್ತಾನ ಸಂಘರ್ಷವನ್ನು ವಿಶ್ಲೇಷಿಸುವ ಬ್ಲಾಗ್ ಪೋಸ್ಟ್‌ನಲ್ಲಿ, ಆಸ್ಟ್ರಿಯಾದ ಸೇನಾ ಇತಿಹಾಸಕಾರ ಟಾಮ್ ಕೂಪರ್ ಪಾಶ್ಚಾತ್ಯ ಮಾಧ್ಯಮಗಳನ್ನು ಟೀಕಿಸಿದರು. ಅವರು “ಪಬ್ಲಿಕ್ ರಿಲೇಷನ್ ಪ್ರಯತ್ನಗಳು” ಎಂದು ಗುರುತಿಸಿದ್ದು, ಜಾಗತಿಕ ಮಟ್ಟದಲ್ಲಿ ನೆಲೆಯಲ್ಲಿನ ಯುದ್ಧ ವಾಸ್ತವವನ್ನು ವಿಕೃತಗೊಳಿಸಿದ್ದವೆಂದು ಹೇಳಿದರು. ಭಾರತವು ಕಳೆದ ವಾರ ಪಾಕಿಸ್ತಾನದ ಒಳಭಾಗದತ್ತ ಸರಿಯಾದ ಕ್ಷಿಪಣಿ ದಾಳಿಗಳ ಸರಣಿಯನ್ನು ಪ್ರಾರಂಭಿಸಿದಾಗ, ಜಾಗತಿಕ ಗಮನವು ಅದರತ್ತ ಸೆಳೆಯಿತು. ಈ ದಾಳಿಗಳ […]

ಯುವ ನಾಯಕತ್ವ ಮತ್ತು ಕರ್ನಾಟಕ ರಾಜಕೀಯದ ಭವಿಷ್ಯ.

By Bhimashankar Teli ೨೦೨೩ ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ೧೧೦ ರಿಂದ ೬೫ ಕ್ಕೆ ಬಂದು ನಿಂತಿತ್ತು. ಖ್ಯಾತ ಪತ್ರಕರ್ತರಾದ ವಿಶೇಶ್ವರಯ್ಯ ಭಟ್ ಅವರು ಹೀಗೆ ಬರೆದಿದ್ದರು ” ವಿಜಯಪುರದ ಕೂಗುಮಾರಿ ‘, ಮಾಜಿ ಮುಖ್ಯಮಂತ್ರಿಯವರ ಬಗ್ಗೆ “ಮಂಡೆ ಹಿಡಿದರು ಬೋಳು , ಕುಂಡೆ ಹಿಡಿದರೂ ಬೋಳು”, ಪ್ಯಾದೆ ಮೆಂಟಾಲಿಟಿ , ಸಂಘದ ಕೂಸು . ಬೆಳಗಾವಿ ಬಳುವಿನ. ಅವರ ಅಂಕಣ ಬಿಜೆಪಿ ಸೋಲಿಗೆ ಯಾರು […]

ಯುಐ(UI) ಕನ್ನಡ ಚಿತ್ರರಂಗದ ಒಳ್ಳೆಯ ಸಿನಿಮಾ ! ಮನಸ್ಸನ್ನು ಖಾಲಿ ಮಾಡಿಕೊಂಡು ಹೋಗಿ ನೋಡಿ!

ಕರಿಮಣಿ ಮಾಲೀಕ “ಏನಿಲ್ಲ ಏನೆನೆಯಿಲ್ಲ” ಹಾಡು ಸರಳವಾಗಿದ್ದರೂ ೧೫ ವರ್ಷಗಳ ನಂತರ ಅದರ ಅರ್ಥ ತಿಳಿದಿತ್ತು. ಯುಐ ಚಿತ್ರ ಅತ್ಯಂತ ಸುಲಭವಾಗಿ ಅರ್ಥ ಮಾಡಿಕೊಳ್ಳುವ ಚಿತ್ರ ಆದರೆ ಒಂದು ಷರತ್ತು, ನಿಮ್ಮ ಮನಸ್ಸು ಖಾಲಿಯಾಗಿ ಇರಬೇಕು. ಉಪೇಂದ್ರರ ನಿರ್ದೇಶನ ಯಾವಾಗಲೂ ಒಂದು ಸಂದೇಶ ಕೊಡುತ್ತದೆ . ಈ ಚಿತ್ರದಲ್ಲಿ ಸಹಿತ ಸಂದೇಶ ಕೊಟ್ಟಿದ್ದಾರೆ. ಉಪೇಂದ್ರ ಯಾವಾಗಲೂ ಬೇರೆ ತರಹ ಚಿತ್ರ ಕೊಡುವಲ್ಲಿ ಎತ್ತಿದ ಕೈ. ಅವರಲ್ಲಿ ಸಾಮಾಜಿಕ […]

ಸುಕನ್ಯಾ ಸಮೃದ್ಧಿ ಯೋಜನೆ (Sukanya Samriddhi Yojana)

ಸುಕನ್ಯಾ ಸಮೃದ್ಧಿ ಯೋಜನೆ (SSY) ಭಾರತದ ಸರ್ಕಾರದಿಂದ ಚಾಲನೆಯಲ್ಲಿರುವ ಒಂದು ವಿಶಿಷ್ಟ ಉಳಿತಾಯ ಯೋಜನೆಯಾಗಿದೆ. ಈ ಯೋಜನೆ ಬಾಲಕಿಯರ ಭವಿಷ್ಯಕ್ಕಾಗಿ ಆರ್ಥಿಕವಾಗಿ ಶಕ್ತಿ ನೀಡಲು ತಯಾರಿಸಲಾಗಿದೆ. ಈ ಯೋಜನೆಯಲ್ಲಿಯು ಬಡ್ಡಿ ದರವು ಇತರ ಉಳಿತಾಯ ಯೋಜನೆಗಳಿಗಿಂತ ಹೆಚ್ಚು ಆಗಿದೆ ಮತ್ತು ಸರ್ಕಾರದಿಂದ ಬೆಂಬಲಿತವಾಗಿದೆ. ಯೋಜನೆಯ ಪ್ರಮುಖ ವೈಶಿಷ್ಟ್ಯಗಳು: ಯೋಜನೆಯ ಲಾಭಗಳು: ಉದಾಹರಣೆ:ನೀವು ಪ್ರತಿ ವರ್ಷ ₹50,000 ಕಡಿಮೆ ಮಾಡುತ್ತಿದ್ದೀರಾ ಎಂದು ಕಲ್ಪನೆ ಮಾಡಿದರೆ, 21 ವರ್ಷಗಳಲ್ಲಿ ಈ […]

ಮುದ್ರಾ ಯೋಜನೆ!

ಮುದ್ರಾ ವೈಶಿಷ್ಟ್ಯಗಳು: ಮುದ್ರಾ / ಪ್ರಧಾನಿ ಮುದ್ರಾ ಯೋಜನೆ (PMMY) ಬಗ್ಗೆ:ಮುದ್ರಾ ಅನ್ನು ದೇಶದ ಮೈಕ್ರೋ ಉದ್ಯಮಗಳಿಗೆ ಹಣಕಾಸು ನೀಡಲು ಮತ್ತು ಬ್ಯಾಂಕ್‌ಗಳು ಹಾಗೂ ಇತರ ಸಾಲ ನೀಡುವ ಸಂಸ್ಥೆಗಳಿಗೆ ಮರುಹಣಕಾಸು ನೀಡಲು ಸ್ಥಾಪಿಸಲಾಗಿದೆ.ಇದು ಮೈಕ್ರೋ ಉದ್ಯಮ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲು ಮತ್ತು ಲಾಭದಾಯಕವಾಗಿ ತಲುಪಿಸಲು ವಿವಿಧ ಆರ್ಥಿಕ, ವ್ಯವಹಾರ ಸಾಕ್ಷರತಾ ಕಾರ್ಯಕ್ರಮಗಳನ್ನು ನೀಡುವ ಉದ್ದೇಶವಿದೆ. ಯಾರು ಮುದ್ರಾ ಸಾಲ ಪಡೆಯಬಹುದು? ತಯಾರಿಕೆ, ವ್ಯಾಪಾರ, ಪ್ರಕ್ರಿಯೆ ಅಥವಾ […]

ರಾಜ್ಯದಲ್ಲಿ ನಡೆಯುತ್ತಿದೆಯಾ ಹೊಂದಾಣಿಕೆ ರಾಜಕೀಯ? ಹೇಗಿದೆ ವಿಜಯೇಂದ್ರರ ಮತ್ತು ಕಾರ್ಯಕರ್ತರ ಸಂಬಂಧ!

By Bhimashankar Teli ಸ್ನೇಹಮಹಿ ರಾಜ್ಯದ ರಾಜಕೀಯ:- ಚಾಣಕ್ಯನ ಪ್ರಕಾರ ರಾಜ್ಯದಲ್ಲಿ ಶಾಂತಿ ಮತ್ತು ಸ್ಥಿರತೆ, ಸಮಗ್ರ ಅಭಿವೃದ್ಧಿ, ರಾಜಕೀಯ ಸ್ಥಿರತೆ, ನ್ಯಾಯಯುತ ಆಡಳಿತ, ಮತಭೇದಗಳ ನಿವಾರಣೆ ಮತ್ತು ಸಾಮರಸ್ಯಕ್ಕಾಗಿ ವಿರೋಧಿಗಳ ಜೊತೆ ಅನಿವಾರ್ಯವಾಗಿ ರಾಜಕೀಯ ಹೊಂದಾಣಿಕೆ ಮಾಡಿಕೊಳ್ಳುವುದು ತಪ್ಪಲ್ಲ. ಆದರೆ ವ್ಯಯಕ್ತಿಕ ಲಾಭಕ್ಕಾಗಿ ಹೊಂದಾಣಿಕೆ ನಿಷಿದ್ಧ! ರಾಜ್ಯದಲ್ಲಿ ಅತಿ ಹೆಚ್ಚು ಮೆಚ್ಚುಗೆ ಪಡೆದ ರಾಮಕೃಷ್ಣ ಹೆಗ್ಡೆ ಮೇಲೆದೇವೇಗೌಡರ ಬೆಂಬಲಿಗರು ಚಪ್ಪಲಿ ಎಸೆದಿದ್ದರು ಮತ್ತು ಹೊಡೆದಿದ್ದರು. ದೇವೇಗೌಡರ […]

ಗುರು ಪೂರ್ಣಿಮೆಯ ಶುಭಾಶಯಗಳು. ಜ್ಞಾನಯೋಗಾಶ್ರಮದಲಿ ಗುರು ನಮನ ಕಾರ್ಯಕ್ರಮ!

By Bhimashankar Teli ನಿರ್ಮೋಹಿ , ಮಹಾನ ಸಂತ , ತಮ್ಮ ಜೀವಿತಾವಧಿಯಲ್ಲಿ ತಮ್ಮ ಅಂಗಿಗೆ ಜೇಬಿಲ್ಲದೆ ಅಧ್ಯಾತ್ಮ ಚಿಂತಕರಾಗಿ ವೈರಾಗ್ಯ ಜೀವನವನ್ನು ಸಾಗಿಸಿ ಲಕ್ಷಾಂತರ ಭಕ್ತರನ್ನು ಹೊಂದಿದರೂ , ಶ್ರೀಮಂತ , ಬಡವ ಎಂಬ ಭೇದಭಾವವಿಲ್ಲದೆ ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ಕಂಡಿದ್ದ ಸಿದ್ದೇಶ್ವರ ಮಾಹಾ ಸ್ವಾಮಿಗಳ ಗುರುಗಳು ಮಹಾನ್ ಸಂತ ಮಲ್ಲಿಕಾರ್ಜುನ ಸ್ವಾಮಿಗಳು. ವಿಜಯಪುರದ ಜ್ಞಾನ ಯೋಗಾಶ್ರಮದ ಗುರುಗಳಾದ ಮಲ್ಲಿಕಾರ್ಜುನ ಮಾಹಾಸ್ವಾಮಿಗಳ ಶಿಷ್ಯರಾದ ಸಿದ್ದೇಶ್ವರ ಸ್ವಾಮಿಗಳು, […]

ಮುಂಗಾರಿನ ಮಳೆಗೆ ಮೈಗೋಡವಿ ನಿಂತ ನನ್ನ ಭಾವನೆಗಳು ! Part -2

By Bhimashankar Teli ಚಿಕ್ಕಮಗಳೂರಿನ ಪ್ರವಾಸದಲ್ಲಿ ಅಂದು ರಾತ್ರಿ ಎಲ್ಲರೂ ” ಒಹೋ ಶಿವಾ ನ ಪ್ರೇಯಸಿ?” ಎಂದು ಕೂಗಿದಾಗ ಅಲ್ಲಿ ನಮ್ಮ ಯಜಮಾನರು ಮುಗುಳನಗುತ್ತಿದ್ದರು! ನಾವೆಲ್ಲರೂ ಹತ್ತನೇ ತರಗತಿ ನಂತರ ಕಾಲೇಜು ಸೇರಿಕೊಂಡ ದಿನಗಳು! ತಮಗೆ ಇಷ್ಟವಾದ ವಿಷಯ ಆಯ್ಕೆ ಮಾಡಿಕೊಂಡು ಬೇರೆ ಬೇರೆ ಕಾಲೇಜುಗಳಿಗೆ ಸೇರಿದರು. ಕೆಲವರು ನಮ್ಮ ಕಾಲೇಜಿಗೆ ಸೇರಿಕೊಂಡಿದ್ದರು. ಪಿಯುಸಿ ಅಭ್ಯಾಸ ಎಷ್ಟು ಇತ್ತಂದರೆ ನಮ್ಮ ಜೀವನ್ ಸೈನ್, ತೀಟಾ ಎಂದೇ […]

ಮುಂಗಾರಿನ ಮಳೆಗೆ ಮೈಗೋಡವಿ ನಿಂತ ನನ್ನ ಭಾವನೆಗಳು !

By Bhimashankar Teli ಅರ್ಜುನ ಪಾಶುಪತಾಸ್ತ್ರ ಪಡೆಯಲು ಕಠೋರ ತಪಸ್ಸು ಮಾಡಿ ಶಿವನಿಂದ ಪಾಶುಪತಾಸ್ತ್ರ ಪಡೆದು ಕುರುಕ್ಷೇತ್ರದಲ್ಲಿ ಝೇಂಕರಿಸಿದ್ದು ಕೌರವರ ಜಂಗಾಬಲವೇ ಅಡಗಿಸಿತ್ತು! ಕುರುವಂಶದ ಕುಲಪುತ್ರ ದುರ್ಯೋಧನ ಅಸಾಮಾನ್ಯ ಶೂರ! ಅವರ ಹತ್ತಿರ ಇದ್ದವರು ಗುರು ದ್ರೋಣಾಚಾರ್ಯ, ಕರ್ಣ!, ಇಚ್ಛಾಮರಣಿ , ಗಂಗೆ ಪುತ್ರ , ಪರಶುರಾಮರ ಜೊತೆ ಯುದ್ಧಕ್ಕಿಳಿದ ವೀರ ಮಹಾಮಹಿಮ ಭೀಷ್ಮ! ಕೃಷ್ಣ ಕುರುಕ್ಷೇತ್ರದ ಆಳ ಮೊದಲೇ ಬಲ್ಲವನಾಗಿದ್ದರಿಂದ , ಅರ್ಜುನನನಿಗೆ ನೀನು ಪರಮೇಶ್ವರರ […]

ಕರ್ನಾಟಕ ರಾಜ್ಯದ ಲೋಕಸಭೆಯ ಚುನಾವಣೆಯ ಸಮೀಕ್ಷೆ! ಬಿಜೆಪಿ – ೨೨-೨೩, ಜೆಡಿಸ್ – ೨, ಕಾಂಗ್ರೆಸ್ – ೩-೪

ಕೆಳಗಿನ ಅಂಶಗಳು ಗಣನೆಗೆ ತೆಗೆದುಕೊಂಡಿದ್ದೇವೆ. ೧. ನಗರ ಪ್ರದೇಶದ ಮತದಾರರು ಮತ್ತು ದೇಶದ ಬಗ್ಗೆ ಅಭಿಮಾನ ಹೊಂದಿದವರು.೨. ಕಾಂಗ್ರೇಸ್ ಸಾಂಪ್ರದಾಯಕ ಮತಗಳು೩. ಬಿಜೆಪಿ ಸಂಪ್ರದಾಯಕ ಮತಗಳು೪. ಸೋಶಿಯಲ್ ಮೀಡಿಯಾದಲ್ಲಿ ಜನರ ಅಭಿಪ್ರಾಯ೫. ಟಿವಿ ಮಾಧ್ಯಮದ ಜನರ ಬಳಿ ಹೋಗಿ ಪಡೆದ ಅಭಿಪ್ರಾಯ೬. ಸದ್ಯದ ಟ್ರೆಂಡ್ ಮೋದಿ !೭ ಉಚಿತ ಫಲಾನುಭವಿಗಳ ಮತದಾರರು೮ ಕಳೆದ ೪-೫ ಲೋಕಸಭೆಯ ಚುನಾವಣೆಯ ಅಂಕಿ ಸಂಖ್ಯೆ೯. ಬೆಲೆ ಏರಿಕೆ ಮತ್ತು ಕೇಂದ್ರ ಸರ್ಕಾರ […]

ವಿಜಯಪುರದ ಗೆಲ್ಲುವ ಕುದರೆ ಬಿಜೆಪಿಗೆ ಸೋಲಿಸುವುದು ಸುಲಭದ ಮಾತಲ್ಲ! ಲೆಕ್ಕ ನೋಡಿ

By Bhimashankar Teli ರಮೇಶ್ ಜಿಗಜಿಣಗಿ ಮತ್ತು ರಾಜು ಆಲಗೂರ್ ಇಬ್ಬರು ಜಿಲ್ಲೆಯ ಜನತೆಗೆ ಚಿರಪರಿಚಿತ. ಮೊದಲ ಬಾರಿಗೆ ರಾಜು ಆಲಗೂರ ಅವರು ಲೋಕಸಭೆಯ ಚುನಾವಣೆಯ ಕಣಕ್ಕೆ ಇಳಿದಿದ್ದಾರೆ. ಈ ಬಾರಿ ಕಾಂಗ್ರೇಸ್ನ ಎಲ್ಲಾ ಶಾಸಕರು ಪ್ರಚಾರ ಮಾಡಿ ಕಾಂಗ್ರೇಸ್ ಪಕ್ಷ ಗೆಲ್ಲಿಸಬೇಕು ಎಂದು ಹಠ ತೊಟ್ಟು ಓಡಾಟ ಮಾಡುತ್ತಿದ್ದಾರೆ. ಮತ್ತೊಂದು ಕಡೆ ಲಕ್ಷಣ್ ಸವದಿಯವರ ಪ್ರಚಾರ ಬರಾಟೆನು ಇದೆ. ಜಾತಿ ಜಾತಿಗಳನ್ನು ಒಂದುಗೂಡಿಸಿ ಕಾಂಗ್ರೇಸ್ ಗೆಲ್ಲಲು […]

ಕನ್ನಡಿಗ ಸಂತೋಷ ಶಿರಡೋಣ ಸಾಧನೆ ಯುವ ಪೀಳಿಗೆಗೆ ಮಾದರಿ !

ವಿಜಯಪುರದ ಶ್ರೀಕಾಂತ ಶಿರಡೋಣ ಮತ್ತು ಅನ್ನಪೂರ್ಣ ಶಿರಡೋಣ ದಂಪತಿಯ ಪುತ್ರ ಸಂತೋಷನ ಸಾಧನೆ ಕನ್ನಡಿಗರಿಗೆ ಸಂತೋಷ ತಂದಿದೆ. ಯುಪಿಎಸ್ಸಿ ಪರೀಕ್ಷೆ ಪಾಸಾಗುವುದು ಒಂದು ತಪಸ್ಸು ಇದ್ದ ಹಾಗೆ. ಸತತ ಪರಿಶ್ರಮ ,ಶೃದ್ದೆ , ಶಿಸ್ತುಬದ್ಧ ಓದುವಿಕೆ, ಮನಸ್ಸು ನಿಗ್ರಹ ಮತ್ತು ಕುಟುಂಬದ ಸಂಪೂರ್ಣ ಬೆಂಬಲದಿಂದ ಕಠಿಣವಾದ ಪರೀಕ್ಷೆಯನ್ನು ನಾನು ಪಾಸುಮಾಡಿದ್ದೇನೆ. ನನ್ನ ಪ್ರಯತ್ನದ ಜೊತೆ ಭಗವಂತನ ಮತ್ತು ಹಿರಿಯರ ಆಶೀರ್ವಾದದಿಂದ ಆಯ್ಕೆಯಾಗಿದ್ದಕ್ಕೆ ತುಂಬಾ ಸಂತೋಷವಾಗಿದೆ. ಶಿರಡೋಣದ ಹುನ್ನೂರ […]

ನುಡಿದಂತೆ ನಡೆದ ಜನರ ಹೆಮ್ಮೆಯ ಪ್ರತಿನಿಧಿ!

By ವಿನೋದ ಶಾಹಾಪೂರ(ಹಡಲಸಂಗ) ಇಂಡಿ ತಾಲೂಕಿನ ಹೆಮ್ಮೆ “ ಶ್ರೀ ಯಶವಂತರಾಯಗೌಡ ವ್ಹಿ ಪಾಟೀಲ” ಅವರು ಮೇ 2023 ರ ಚುಣಾವಣೆ ಪೂರ್ವದಲ್ಲಿ ಕ್ಷೇತ್ರದ ಜನರಿಗೆ ನೀಡಿದ ಅತೀ ಮೂರು ಮುಖ್ಯ ಭರವಸೆಗಳಲ್ಲಿ. ಎರಡು ಭರವಸೆಗಳನ್ನು ಈಡೇರಿಸುವತ್ತ ದಿಟ್ಟ ಹಾಗೂ ಪ್ರಾಮಾಣಿಕಹೆಜ್ಜೆಗಳನ್ನಿರಿಸಿದ್ದಾರೆ. ಅವರು ನೀಡಿರುವ ಮೊದಲನೇಯ ಭರವಸೆ ಇಂಡಿಯನ್ನು ಜಿಲ್ಲಾಕೇಂದ್ರವನ್ನಾಗಿ ಮಾಡುವುದು. ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯನ್ನಿಟ್ಟು ಮತ್ತೋಮ್ಮೆಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಸರಕಾರದ ಗಮನಕ್ಕೆ ತಂದು, ಸರಕಾರಕ್ಕೆಒತ್ತಾಯಿಸಿದ್ದಾರೆ. […]

ಬೆಂಗಳೂರು ಗ್ರಾಮಾಂತರ ಕ್ಷೇತ್ರ – ಹೈ ವೋಲ್ಟೇಜ್ ಕ್ಷೇತ್ರ. ಬಿಜೆಪಿ ಗೆಲ್ಲಬಹುದೇ?

By Bhimashankar Teli ಬೆಂಗಳೂರ ಗ್ರಾಮಾಂತರದ ಬಲಾಬಲ ತಿಳಿದುಕೊಳ್ಳೋಣ. ಒಟ್ಟು 7 ಕ್ಷೇತ್ರಗಳು ಬರುತ್ತವೆ. ಮೇಲ್ನೋಟಕ್ಕೆ ಹಲವು ಕ್ಷೇತ್ರಗಳು ಜೆಡಿಸ್ ಮತ್ತು ಕಾಂಗ್ರೆಸ್ ಭದ್ರಕೋಟೆಗಳು. ರಾಜರಾಜೇಶ್ವರ ಮತ್ತು ಬೆಂಗಳೂರು ದಕ್ಷಿಣ ಬಿಜೆಪಿಯ ಕೋಟೆಗಳು. ೨೦೦೯ರಿಂದ ೨೦೧೯ರ ಚುನಾವಣೆಗಳಲ್ಲಿ ಯಾವ್ಯಾವ ಕ್ಷೇತ್ರಗಳಲ್ಲಿ ಕಾಂಗ್ರೇಸ್ ಮತ್ತು ಬಿಜೆಪಿ ಪಕ್ಷಗಳು ಮತಗಳನ್ನು ಪಡೆದಿವೆ. ಕನಕಪುರ, ಮಾಗಡಿ, ರಾಮನಗರ ಮತ್ತು ಕುಣಿಗಲ್ ಯಾವಾಗಲೂ ಕಾಂಗ್ರೇಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ದೊಡ್ಡ ಅಂತರದ ಮತಗಳು […]

ಹಿಂದೂಗಳ ದೊಡ್ಡ ಹಬ್ಬ ಯುಗಾದಿ. ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತ್ತಿದೆ.

ಇಂದಿನ ಯುವ ಪೀಳಿಗೆಗಳು ನಮ್ಮ ಹಿಂದೂ ಹಬ್ಬಗಳ ಬಗ್ಗೆ ತಿಳಿದುಕೊಳ್ಳುವದು ಅತಿಅವಶ್ಯ! ನಮ್ಮ ಯಾವದೇ ಹಬ್ಬ ನಮ್ಮ ಪ್ರಕೃತಿಯ ಜೊತೆ ಬೆರೆತಿದೆ. ನಮ್ಮ ಹಬ್ಬಗಳ ವಿಶೇಷತೆ ನಾವು ತಿಳಿದುಕೊಂಡು ನಮ್ಮ ನಮ್ಮ ಮಕ್ಕಳಿಗೆ ಇದರ ಬಗ್ಗೆ ತಿಳಿಸಿಕೊಡುವುದು ಬಹಳ ಮುಖ್ಯ! ಹೇಗೆ ಹಬ್ಬಗಳು ನಮ್ಮ ಜೀವನ ಮತ್ತು ಕುಟುಂಬ ಸದೃಢವಾಗಿರುತ್ತದೆ ಎಂದು ತಿಳಿಯಲು ಖಂಡಿತ ನಾವು ನಮ್ಮ ಹಬ್ಬಗಳ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ. ನಮ್ಮ ಕೆಲಸದ ಒತ್ತಡದಿಂದ […]

ಲಿವಿಂಗ್ ಲೆಜೆಂಡ್ ಹೃದಯದ ವಿಜಯಿ ಹೃದಯವಂತ ಡಾಕ್ಟರ್ ಮಂಜುನಾಥ್, ಲೋಕಸಭೆ ಅಖಾಡಕ್ಕೆ!

ದೇಶದ ಗೃಹಮಂತ್ರಿ ಚನ್ನಪಟ್ಟಣದಲ್ಲಿ ರೋಡ್ ಶೋ ಮಾಡಿ ಚುನಾವಣೆಗೆ ಮುನ್ನುಡಿ ಬರೆದಿದ್ದಾರೆ. ಬೆಂಗಳೂರು ಗ್ರಾಮಾಂತರ ಚುನಾವಣೆ ರಾಜ್ಯದಲ್ಲಿ ಹೈ ವೋಲ್ಟೇಜ್ ಕ್ಷೇತ್ರ. ೨೦೧೯ರ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ೨೫ ಕ್ಷೇತ್ರಗಳಲ್ಲಿ ವಿಜಯಪತಾಕೆ ಹಾರಿಸಿತ್ತು ಆದರೆ ಮೋದಿ ಮತ್ತು ರಾಜ್ಯ ನಾಯಕ ಯಡಿಯೂರಪ್ಪನವರ ವರ್ಚಸ್ಸಿನಲ್ಲೂ ಡಿಕೆ ಸುರೇಶ ಗೆಲುವಿನ ನಗೆ ಬೀರಿದ್ದರು. ಅಂತಹ ಪ್ರಚಂಡವನ್ನು ಹಿಡಿತವನ್ನು ಡಿಕೆ ಸಹೋದರರು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಇದೆ. ೨೦೨೩ರಲ್ಲಿ ನಡೆಯುತ್ತಿರುವ ಚುನಾವಣೆ […]

ತತ್ವಜ್ಞಾನಿ ಸಾಕ್ರಟೀಸ್!

ಸಾಕ್ರಟೀಸ್ ಪಾಶ್ಚಿಮಾತ್ಯ ತತ್ತ್ವಶಾಸ್ತ್ರದ ಸಂಸ್ಥಾಪಕರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟ ಶಾಸ್ತ್ರೀಯ ಗ್ರೀಕ್ ತತ್ವಜ್ಞಾನಿ. ಅವರು 5 ನೇ ಶತಮಾನದ BCE ಸಮಯದಲ್ಲಿ ಅಥೆನ್ಸ್‌ನಲ್ಲಿ ವಾಸಿಸುತ್ತಿದ್ದರು ಮತ್ತು ನೈತಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳು ಮತ್ತು ನಂತರದ ತತ್ವಜ್ಞಾನಿಗಳ ಮೇಲೆ ಅವರ ಪ್ರಭಾವಕ್ಕೆ ಹೆಸರುವಾಸಿಯಾಗಿದ್ದಾರೆ. ಸಾಕ್ರಟೀಸ್ ಬಗ್ಗೆ ಕೆಲವು ಮೂಲಭೂತ ಅಂಶಗಳು ಇಲ್ಲಿವೆ: ತತ್ತ್ವಶಾಸ್ತ್ರಕ್ಕೆ ಸಾಕ್ರಟೀಸ್ ನೀಡಿದ ಕೊಡುಗೆಗಳು ಅವರನ್ನು ಪಾಶ್ಚಿಮಾತ್ಯ ಚಿಂತನೆಯ ಇತಿಹಾಸದಲ್ಲಿ ಅಡಿಪಾಯದ ವ್ಯಕ್ತಿಯಾಗಿ ಮಾಡಿದೆ.

ಸೋಮನಾಥ ಟು ಅಯೋಧ್ಯಾ ಯಾತ್ರೆಯ ಸೂತ್ರಧಾರನ ಕೆಲಸ ಹೇಗಿತ್ತು.

ಜನವರಿ ೨೨ಕ್ಕೆ ಅಯೋಧ್ಯಯಲ್ಲಿ ರಾಮಮಂದಿರ ಲೋಕಾರ್ಪಣೆಗೊಳ್ಳುತ್ತಿರುವ ಸಮಯದಲ್ಲಿ, ಸ್ವತಃ ಅಡ್ವಾಣಿಯವರು ಹೇಳಿದ ಮಾತು! “ಮರ್ಯಾದಾ ಪುರೋಷತ್ತಮ ಶ್ರೀರಾಮಚಂದ್ರ ತನ್ನ ಮಂದಿರವನ್ನು ನಿರ್ಮಿಸಿಕೊಳ್ಳಲು , ರಾಮಭಕ್ತನಾದ ನರೇಂದ್ರ ಮೋದಿಯವರನ್ನು ಭೂಮಿಗೆ ಕರೆಯಿಸಿಕೊಂಡಿದ್ದಾರೆ” ದೇಶಕ್ಕೆ ಸ್ವಾತಂತ್ರ್ಯ ೧೯೪೭ ರಲ್ಲಿ ಸಿಕ್ಕಿತಾದರೂ ಆದರೆ ನಿಜವಾಗಿ ದೇಶ ಪ್ರಜಾಪ್ರಭುತ್ವದಿಂದ ತುಂಬಾನೇ ದೂರ ಉಳಿದಿತ್ತು. ದೇಶಕ್ಕೆ ಸ್ವಾತಂತ್ರ್ಯ ಕೊಡಿಸುವಲ್ಲಿ ಬಹಳ ಜನರ ಬಲಿದಾನ ಇತ್ತು. ಕಾಂಗ್ರೆಸ್ ಎಂಬ ಸಂಘಟನೆ ದೇಶಕ್ಕೆ ಸ್ವಾತಂತ್ರ್ಯಕ್ಕಾಗಿ ಇದ್ದ ಸಂಘಟನೆ […]

ಪಾಸ್ಕಲ್ ಜನಕ ನಿಕ್ಲಾಸ್ ವಿರ್ತ ವಿಧಿವಶ. ನೀವು ಪಾಸ್ಕಲ್ ಪ್ರೋಗ್ರಾಮ್ ಬರೆದಿದ್ದರೇ , ನಿಮಗೆ ವಯಸ್ಸಾಗಿದೆ ಎಂದರ್ಥ !

By Bhimashankar Teli ಈಗಿನ ವಿದ್ಯಾರ್ಥಿಗಳಿಗೆ ಪಾಸ್ಕಲ್ ಕಂಪ್ಯೂಟರ್ ಭಾಷೆ ಗೊತ್ತಿಲ್ಲ ಕಾರಣ ಇವಾಗ ಏನಿದ್ದರೂ ಹೊಸ ಕಂಪ್ಯೂಟರ್ ಭಾಷೆಗಳ ಕಾಲ ಪೈಥಾನ್ , ಜಾವಾ ಇತ್ಯಾದಿ. ಒಂದು ವೇಳೆ ನಿಮ್ಮ ಕಾಲೇಜ್ ಜೀವನದಲ್ಲಿ ಪಾಸ್ಕಲ್ ಬಗ್ಗೆ ಪ್ರೋಗ್ರಾಮ್ ಬರೆದಿದ್ದರೇ ನೀವು ತುಂಬಾ ಹೆಳೆಯ ವಿದ್ಯಾರ್ಥಿ ಇರಬೇಕಷ್ಟೆ! ಕಂಪ್ಯೂಟರ್ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿ ಹೊಸ ಪಾಸ್ಕಲ್ ಭಾಷೆ ಆವಿಷ್ಕಾರ ಮಾಡಿದ ನಿಕ್ಲಾಸ್ ವಿರ್ತ ವಿಧಿವಶರಾಗಿದ್ದಾರೆ. ಅವರ […]

ಕನ್ನಡ ವಿಶ್ವ ಟೆಸ್ಟಿಂಗ್ ಗುಂಪಿನಿಂದ ಅದ್ದೂರಿ ಕರ್ನಾಟಕ ರಾಜ್ಯೋತ್ಸವ!

By Bhimashankar Teli ವಿಶ್ವ ಕನ್ನಡ ಟೆಸ್ಟಿಂಗ್ ಗುಂಪು ಕನ್ನಡಿಗರ ವಾಟ್ಸ್ ಆಪ್ ಗುಂಪು. ನಮ್ಮ ಕನ್ನಡಿಗರಿಗೆ ಸಾಫ್ಟ್ವೇರ್ ಕಂಪೆನಿಗಳಲ್ಲಿ ಕೆಲಸ ಸಿಗುವಲ್ಲಿ, ಹಿರಿಯರ ಅನುಭವವನ್ನು ಹಂಚುವದಕ್ಕೆ ಉಪಯೋಗವಾಗಲಿ ಎಂದು ಸ್ಥಾಪನೆಯಾದ ಗುಂಪು. ನಮ್ಮವರು ಮುಂದೆ ಬರಲಿ, ನಮ್ಮವರೆಗೆ ಕೆಲಸ ಸಿಗಲಿ ಎಂದು ನಿಶ್ವಾರ್ಥವಾಗಿ ಕೆಲಸ ಮಾಡುವ ಟೆಕಿಗಳ ಗುಂಪು. ಮೊದಲು ಯಾಹೂ ಗ್ರೂಪ್ಸ್ ಮೂಲಕ ತಮ್ಮ ತಮ್ಮ ಜನರಿಗೆ ಕೆಲ್ಸದ ಬಗ್ಗೆ ಮಾಹಿತಿ ಕೊಡುತ್ತಿದ್ದರು. ಕನ್ನಡದವರಲ್ಲಿ […]

ರೈತರ ಜ್ವಲಂತ ಸಮಸ್ಯೆಗಳು , ಸಮಸ್ಸ್ಯೆಗೆ ಪರಿಹಾರ ಇದೆಯಾ? ಭಾರತ ಮತ್ತು ಇಸ್ರೇಲ್ ಕೃಷಿ! ತಂತ್ರಜ್ಞಾನದ ನೆರವು ಎಷ್ಟಿದೆ?

By Bhimashankar Teli ಪ್ರಪಂಚದಾದ್ಯಂತದ ರೈತರು ವಿವಿಧ ಸವಾಲುಗಳನ್ನು ಎದುರಿಸುತ್ತಾರೆ ಮತ್ತು ಅವರ ನಿರ್ದಿಷ್ಟ ಸಮಸ್ಯೆಗಳು ಸ್ಥಳ, ಹವಾಮಾನ ಮತ್ತು ಅವರು ಉತ್ಪಾದಿಸುವ ಬೆಳೆಗಳು ಅಥವಾ ಜಾನುವಾರುಗಳ ಆಧಾರದ ಮೇಲೆ ಬದಲಾಗಬಹುದು. ರೈತರು ಎದುರಿಸುವ ಕೆಲವು ಸಾಮಾನ್ಯ ಸಮಸ್ಯೆಗಳು: ಹವಾಮಾನ ಬದಲಾವಣೆ: ಹವಾಮಾನದ ಬದಲಾವಣೆಗಳು, ಹವಾಮಾನ ವೈಪರೀತ್ಯಗಳು ಮತ್ತು ಹವಾಮಾನದಲ್ಲಿನ ದೀರ್ಘಾವಧಿಯ ಬದಲಾವಣೆಗಳು ಬೆಳೆ ಇಳುವರಿ ಮತ್ತು ಜಾನುವಾರುಗಳ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ರೈತರು ಚೇತರಿಸಿಕೊಳ್ಳುವ […]

ಜನರೇಟಿವ್ AI- ಉತ್ಪಾದಕ ಕೃತಕ ಬುದ್ಧಿಮತ್ತ.

By Bhimashankar Teli ಕೃತಕ ಬುದ್ಧಿಮತ್ತೆಯ ಉಪವಿಭಾಗ, ಇತ್ತೀಚಿನ ವರ್ಷಗಳಲ್ಲಿ ಗಮನಾರ್ಹ ದಾಪುಗಾಲುಗಳನ್ನು ಮಾಡಿದೆ, ನಾವು ತಂತ್ರಜ್ಞಾನದೊಂದಿಗೆ ಸಂವಹನ ನಡೆಸುವ ರೀತಿಯಲ್ಲಿ ಕ್ರಾಂತಿಯನ್ನುಂಟುಮಾಡುತ್ತದೆ ಮತ್ತು ನಮ್ಮ ದೈನಂದಿನ ಜೀವನವನ್ನು ಹೆಚ್ಚಿಸುತ್ತದೆ. ಈ ಲೇಖನವು AI ಗೆ ಸಂಬಂಧಿಸಿದ ಉಪಯೋಗಗಳು, ಅನುಕೂಲಗಳು, ಅನಾನುಕೂಲಗಳು ಮತ್ತು ಸಂಭಾವ್ಯ ಬೆದರಿಕೆಗಳನ್ನು ಪರಿಶೋಧಿಸುತ್ತದೆ, ಜೊತೆಗೆ ಮಾನವ ಸಮಾಜದ ಮೇಲೆ ಅದರ ಪ್ರಭಾವವನ್ನು ನೀಡುತ್ತದೆ. ಜನರೇಟಿವ್ AI ನ ಉಪಯೋಗಗಳು:- ವಿಷಯ ರಚನೆ: ಜನರೇಟಿವ್ […]

ಕೈಯಲ್ಲಿ ನಿಂಬೆಹಣ್ಣು , ಅಭಿಮಾನಿಗಳ ಎದೆಯ ಮೇಲೆ ಹಸ್ತ , ಹ್ಯಾಟ್ರಿಕ್ ಗೆಲುವಿನಲ್ಲಿ ಅಭಿವೃದ್ಧಿ ಕನಸು ಕಾಣುತ್ತಿರುವ ಇಂಡಿ ಜನತೆ!

ಇಂಡಿಯ ಶಾಸಕರು ಜೆಂಟಲ್ಮೆನ್ , ತುಂಬಾ ಬುದ್ದಿವಂತರು , ಅದಕ್ಕೆ ೨೦೨೩ರ ಚುನಾವಣೆಯಲ್ಲಿ ಏನೆ ಆದರೂ ಕೊನೆಗೆ ಗೆಲ್ಲವುದು ಯಶವಂತರಾಯಗೌಡ ಪಾಟೀಲರು ಎಂದು ಅನೇಕರು ಹೇಳುತ್ತಿದ್ದರು. ಇದಕ್ಕೆ ಕಾರಣ ದಶಕಗಳ ಕಾಲ ರಾಜಕೀಯ ಅನುಭವ. ಅನೇಕ ಚುನಾವಣೆ ಎದುರಿಸಿದ ಅನುಭವದಿಂದಲೇ ಸತತವಾಗಿ ಮೂರನೇ ಬಾರಿಗೆ ಗೆಲ್ಲುವದಕ್ಕೆ ಸಾಧ್ಯವಾಗಿದ್ದು. ಆದರೆ ನಿಜ ಹೇಳಬೇಕಂದರೆ ೨೦೨೩ರ ಚುನಾವಣೆಯಲ್ಲಿ ಕಾಂಗ್ರೇಸ್ ಗೆಲ್ಲುವದಕ್ಕೆ ಸಾಧ್ಯವೇ ಇರಲಿಲ್ಲ. ಜೆಡಿಎಸ್ ಕೊನೆಯ ಎರಡು ದಿನಗಳವರೆಗೆ ಬಿಡಿ […]

ಉಚಿತ ಯೋಜನೆ ಇದೊಂದು ಪ್ರಯೋಗವಂತೆ? ಮೇಲ್ವರ್ಗದ ಜನ ದುಡಿದೆ ಇಲ್ವವಂತೆ! ಪ್ರಣಾಳಿಕೆಗಳು ಕೋರ್ಟಲ್ಲಿ ಪ್ರಶ್ನೆ ಮಾಡುವಂತಿರಬೇಕು.

ನಾರಾಯಣ ನಾರಾಯಣ , ಏಳು ನಾರಾಯಣ ,ಏಳು ನಾರಾಯಣ ಬೆಳಗಾಯಿತು! ಇಷ್ಟೊಂದು ಅಸಹ್ಯವಾದ ಚಿಂತನೆ ಸರಿನಾ ? ೫ ಗ್ಯಾರೆಂಟಿ ಯೋಜನೆಗೆಳು ಜಾರಿ ತರುತ್ತೇವೆ ಎಂದು ಚುನಾವಣೆಗಿಂತ ಮುಂಚೆ ಕಾಂಗ್ರೇಸ್ ಪಕ್ಷ ಹೇಳಿತ್ತು. ನಮ್ಮ ರಾಜ್ಯದ ಅನೇಕ ಪ್ರಾಮಾಣಿಕ ಪತ್ರಕರ್ತರು ನೀವು ಹೇಳುತ್ತಿರುವ ಯೋಜನೆಗಳು ಜಾರಿಯಾಗಲು ಹೇಗೆ ಸಾಧ್ಯ ಎಂದು ಪ್ರಶ್ನೆ ಇಟ್ಟಾಗ . ನಮ್ಮ ರಾಜ್ಯದ ಬಜೆಟ್ ೩ಲಕ್ಷ ಕೋಟಿ, ನಿಮ್ಮ ಬಿಟ್ಟಿ ಯೋಜನೆಗಳಿಗೆ ಸುಮಾರು […]

ಕಾಂಗ್ರೇಸ್ ಜೊತೆ ಗುರುತಿಸಿಕೊಂಡಿರುವ ಲಿಂಗಾಯತರಿಗೆ ರಾಜಕೀಯ ಸ್ಥಾನಮಾನ ಅವರ ಹಕ್ಕು! ಸವದಿ ಮತ್ತು ವಿನಯ ಕುಲಕರ್ಣಿ ಅದಕ್ಕೆ ಅರ್ಹರು.

ಲಿಂಗಾಯತರು ಮತ್ತೊಮ್ಮೆ ಕಾಂಗ್ರೇಸ್ ಕಡೆಗೆ:- ರಾಜ್ಯದಲ್ಲಿ ಜನಸಂಖ್ಯೆ ಆದರದ ಮೇಲೆ ಸ್ಥಾನಮಾನಗಳು ಸಿಗುವುದು ಸತ್ಯ! ಸದ್ಯಕ್ಕೆ ೩೦% ಲಿಂಗಾಯತ ಶಾಸಕರು ಕಾಂಗ್ರೇಸ್ ಪಕ್ಷದಲ್ಲಿ ಇದ್ದಾರೆ. ೨೦೨೩ರ ಚುನಾವಣೆಯಲ್ಲಿ ರಾಜ್ಯದಲ್ಲಿ ಈ ಬಾರಿ ಕಾಂಗ್ರೇಸ್ ಜೊತೆ ನಿಂತಿದ್ದಾರೆ ಎನ್ನುವದಕ್ಕೆ ಇದೊಂದೇ ಸಾಕ್ಷಿ ಸಾಕು. ಅನೇಕ ದೊಡ್ಡ ಸಮುದಾಯಗಳು ಎರಡು ಪಕ್ಷದ ಜೊತೆ ಗುರಿತಿಸಿಕೊಂಡಿದ್ದಾರೆ ಮತ್ತು ರಾಜಕೀಯ, ಧರ್ಮ ಮತ್ತು ಜಾತಿ ಬಿಟ್ಟು ಇಲ್ಲವೇ ಇಲ್ಲ. ಮೊನ್ನೆ ಡಿಕೆ ಶಿವಕುಮಾರ […]

ನಾನು ರಾಷ್ಟ್ರವಾದಿ ಮತ್ತು ಮೋದಿ ನಾಯಕತ್ವಕ್ಕೆ ಮೆಚ್ಚಿ ಪಕ್ಷಕ್ಕೆ ಸೇರುತ್ತಿದ್ದೇನೆ. ಯಾರು ರಾಷ್ಟ್ರವಾದಿಗಳು?

ದೃಷ್ಟಿಕೋನ ಅಂಕಣ By Bhimashankar Teli ಮೊಟ್ಟ ಮೊದಲ ಬಾರಿಗೆ ೨೦೧೩ರಲ್ಲಿ ನಾನು ಹುಟ್ಟಿನಿಂದ ಹಿಂದೂ ಆದರೆ ನಾನೊಬ್ಬ ರಾಷ್ಟ್ರೀಯವಾದಿ ಎಂದು ಮೋದಿ ಹೇಳಿದಾಗ ದೇಶದಲ್ಲಿ ಸಂಚಲನ ಮೂಡಿದ್ದು ಸುಳ್ಳಲ್ಲ. ದೇಶದ ತುಂಬೆಲ್ಲಾ ಬೇಕಾದಾಗ ಬಾಂಬ್ ಹಾಕಿ ನಿರ್ದಯವಾಗಿ ಅಮಾಯಕರ ಜೀವಕ್ಕೆ ಬೆಲೆನೇ ಇಲ್ಲದ ಸಮಯದಲ್ಲಿ ಒಬ್ಬ ರಾಜಕೀಯ ಮುಖಂಡ, ಅದರಲ್ಲಿ ಒಂದು ರಾಜ್ಯದ ಮುಖ್ಯಮಂತ್ರಿ ನಾನೊಬ್ಬ ರಾಷ್ಟ್ರೀಯವಾದಿ ಎಂದಾಗ ದೇಶದ ಬಿಸಿ ರಕ್ತದ ಯುವಕರ ಮೈಯಲ್ಲಿ […]

ಉಪಮುಖ್ಯಮಂತ್ರಿ ಪಟ್ಟ ಪುಕ್ಷಟ್ಟೆಯಾಗಿ ಕೊಟ್ಟಿದ್ದಾ? ? ಪಕ್ಷಾಂತರಿಗಳು ಸ್ವಾರ್ಥಕ್ಕಾಗಿ ಬಿಜೆಪಿಗೆ ಬಂದಿದ್ದಲ್ವಾ? ಬಿಜೆಪಿಗೆ ಬಂದ ಮೇಲೆ ಇವರಿಗೆ ಗೌರವ ಹೆಚ್ಚಾಯಿತಾ?

ಪಕ್ಷನಿಷ್ಠೆ ಮತ್ತು ಪರಿಶ್ರಮ :- ಪಕ್ಷ ಯಾಕೆ ಸವದಿಯವರಿಗೆ ಉಪಮುಖ್ಯಮಂತ್ರಿ ಕೊಟ್ಟಿತು? ಯಾಕೆ ರೇಣುಕಾಚಾರ್ಯ, ನಿರಾಣಿ, ಬೊಮ್ಮಾಯಿ, ಅಶೋಕ್ ಅವರಿಗೆ ಕೊಡಬಹುದಿತ್ತಲ್ವಾ? ಈಗಿನ ಕಾಲದಲ್ಲಿ ಒಂದು ರೂಪಾಯಿನೂ ಯಾರು ಪುಕ್ಷಟ್ಟೆಯಾಗಿ ಕೊಡುವದಿಲ್ಲ. ಅಂಥದರಲ್ಲಿ ಘನ ಸರ್ಕಾರದ ಉಪ ಮುಖ್ಯಮಂತ್ರಿ ಹುದ್ದೆ ಬೇಕಾಬಿಟ್ಟಿಯಾಗಿ ಕೊಡುವದಕ್ಕೆ ಸಾಧ್ಯನಾ? ಇಂತಹ ಸಾಮಾನ್ಯ ಜ್ಞಾನವಿಲ್ಲದೆ ಸೋತವರಿಗೆ ಉಪಮುಖ್ಯಮಂತ್ರಿ ಕೊಟ್ಟಿದ್ದು ಎಂದು ಎಲ್ಲರೂ ಪುಂಗಿದ್ದೆ ಪುಂಗಿದ್ದು. ಸತತವಾಗಿ ಮೂರೂ ಬಾರಿ ೨೫ ಸಾವಿರ ಮತಗಳಿಂದ […]

ಸಫಾರಿ ತೊಟ್ಟು ರಾಜಕೀಯ ಮಾಡಿದ ಧೀಮಂತ ನಾಯಕ.

ಶುಭ್ರ ಸಫಾರಿ ಇನ್ನೂ ಹೊಳೆಯುತ್ತಿದೆ, ಸಫಾರಿ ಜನಪ್ರಿಯತೆ ಕುಂದಿಲ್ಲ, ಸಫಾರಿ ಸೇವೆ ಪಕ್ಷಕ್ಕೆ ಬೇಕಿದೆ. ಅದಕ್ಕೆಂದೇ ನನಗೆ ಇನ್ಮುಂದೆ ರಾಜನಾಗುವ ಬಯಕೆ ಇಲ್ಲ , ಆದರೆ ಪಕ್ಷ ಮತ್ತೊಮ್ಮೆ ರಾಜ್ಯದಲ್ಲಿ ಸರ್ಕಾರ ರಚನೆ ಮಾಡಬೇಕು ಅದಕ್ಕಾಗಿ ನನ್ನ ಹೋರಾಟ! ವಿಧಾನಸಭೆಯಲ್ಲಿ ತಮ್ಮ ಕೊನೆಯ ಮಾತು ಹೇಳುವಾಗ ಪಕ್ಷಕ್ಕೆ ಮತ್ತು ಪಕ್ಷದ ಕಾರ್ಯಕರ್ತರಿಗೆ ಕೃತಜ್ಞತೆ ಹೇಳುತ್ತಾ. ನಮ್ಮ ಶಾಸಕರು ಆತ್ಮವಿಶ್ವಾಸದಿಂದ ಮುನ್ನುಗ್ಗಿ , ಮತ್ತೆ ಸರ್ಕಾರ ಮಾಡುವರು ನಾವೇ […]

ಹಗುರವಾಗಿ ಹೇಳಿಕೆ ನೀಡುವವರ ಮಧ್ಯೆ ವಿನಮ್ರವಾಗಿ ಪಕ್ಷ ಸಂಘಟನೆ ಮಾಡುತ್ತಿರುವ ವಿಜಯೇಂದ್ರ .

ರಾಜಕೀಯದಲ್ಲಿ ನಾಯಕರೆನಿಸಿಕೊಂಡವರು ಒಂದು ಹೇಳಿಕೆ ಕೊಟ್ಟರೆ ಅದಕ್ಕೊಂದು ಘನತೆ ಮತ್ತು ಗೌರವ ಇರಬೇಕು. ಹೇಳಿಕೆ ಒರೆಗೆ ಹಚ್ಚಿ ನೋಡಿದಾಗ ಅದು ಸತ್ಯವೆನಿಸಬೇಕು. ರಾಜ್ಯದ ರಾಜಕಾರಣದಲ್ಲಿ ಸಿದ್ದಾಂತದ ರಾಜಕಾರಣ ಮಾಡಿದವರು ಅನೇಕರು. ಅದು ಎಡಪಂಥಿ ಇರಲಿ ಅಥವಾ ಬಲಪಂಥಿ ಇರಲಿ. ತಾವು ಅಂಟಿಕೊಂಡ ಪಥಕ್ಕೆ ಅಧಿಕಾರಕ್ಕಾಗಿ ತಮ್ಮ ಸಿದ್ದಾಂತ ಬದಲಿಸದೆ ರಾಜಕಾರಣದಲ್ಲಿ ಅನೇಕ ಹುದ್ದೆಯನ್ನು ಪಡೆದು ಸೇವೆ ಮಾಡಿದ್ದು ನೋಡಿದ್ದೇವೆ ಮತ್ತು ಕೇಳಿದ್ದೇವೆ. ಲೋಕಸಭೆಯಲ್ಲಿ ತಮ್ಮ ಪಕ್ಷಕ್ಕೆ ಜನರು […]

ಸಿದ್ದೇಶ್ವರ ಶ್ರೀಗಳ ಜೀವನ ಸರಳವಾಗಿದ್ದು, ಕಠೋರ ತ್ಯಾಗದಿಂದ!

By Bhimashankar Teli ವಿಜಯಪುರದ ಜ್ಞಾನಯೋಗಾಶ್ರಮಕ್ಕೆ ಎಲ್ಲ ಮಹನೀಯರು, ಸಂತರು ಮತ್ತು ಸಾಮಾನ್ಯರು ಭೇಟಿ ಕೊಟ್ಟು ಶ್ರೀಗಳ ಗುರುಗಳಾದ ಗುರುದೇವರಾದ ಮಲ್ಲಿಕಾರ್ಜುನ ಸ್ವಾಮಿಗಳ ಗದ್ದುಗೆಗೆ ಪೂಜೆ ಮಾಡಿ ನಮಸ್ಕರಿಸುತ್ತಾರೆ. ಶ್ರೀಗಳು ದೇಹದ ಆಶಯಗಳು ಬಗ್ಗೆ ತಮ್ಮದೇ ವಿಚಾರಗಳು ಹೇಳಿ, ತಮ್ಮನ್ನು ತಾವು ಮತ್ತೊಂದು ಗದ್ದುಗೆ ಆಗುವದಕ್ಕೆ ಆಸ್ಪದ ಕೊಡದೆ ಇರುವ ಕಾರಣ ನಮಗೆ ಇವತ್ತು ತಿಳಿಯುತ್ತಿದೆ. ತಮ್ಮನ್ನು ನೋಡಬೇಕಾದರೆ ನಮ್ಮ ಗುರುಗಳಾದ ಗುರುದೇವರಲ್ಲಿ ಕಾಣಿ! ಅದರ ಜೊತೆ […]

ರಾಜಕೀಯ ಮತ್ತು ಪ್ರಜಾಕೀಯ ಮಧ್ಯೆ ನಡೆಯುತ್ತಿದೆ ಚಿಂತನೆಯ ಯುದ್ಧ! ನನ್ನ ಪಾತ್ರವೇನು?

By Bhimashankar Teli ಪ್ರಜಾಪ್ರಭುತ್ವ, ಸಂವಿಧಾನ, ಹೋರಾಟದ ಕಿಚ್ಚು ,ಭಾಷೆಯ ಹೇರಿಕೆ, ಪ್ರಾದೇಶಿಕ ಭಾಷೆಯ ಕಿಚ್ಚು , ಬಲ ಮತ್ತು ಎಡ ಪಂಥಿ, ಜಿಹಾದ್, ಹಿಂದುತ್ವ, ದೇಶಭಕ್ತಿ, ರಾಷ್ಟ್ರೀಯವಾದಿ, ಕರಿ, ಬಿಳಿ ಹೀಗೆ ಅನೇಕ ಹಲವಾರು ವಿಷಯಗಳು ಜಗತ್ತಿನಲ್ಲಿ ಚಾಲ್ತಿಯಲ್ಲಿವೆ. ಯಾವದೇ ದೇಶದ ಸುಭದ್ರತೆ, ಶ್ರೀಮಂತಿಕೆ ಮತ್ತು ಜನರ ಜೀವನಮಟ್ಟ ಆಳುವ ನಾಯಕ ಮತ್ತು ಸರ್ಕಾರದ ಮೇಲೆ ಅವಲಂಬಿತವಾಗಿದೆ. ನಮಗೆ ಸ್ವಾತಂತ್ರ ಕೊಟ್ಟು ಹೋಗುವಕ್ಕಿಂತ ಮುಂಚೆ ಬ್ರಿಟಿಷರು […]

ನಟ ರಾಕ್ಷಸ ಡಾಲಿ ಚಿತ್ರ ಮೇಲೆ ಮಾತ್ರ ರೌಡಿಗಳ ಚಿತ್ರ , ಒಳಗೆ ಪಕ್ಕಾ ರಾಜಕೀಯ ಚಿತ್ರ . ಹೆಡ್ ಬುಷ್ ಹೇಗಿದೆ?

ಬೆಂಗಳೂರಿನ ಕರಗ , ತಿಗಳರ ಪೇಟೆಯ ಹುಡುಗ ಪೈಲ್ವಾನ್ ಜಯರಾಜ್, ಸುಮಾರು ೭ ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸ್ , ಅವರ ಅಳಿಯ ನಟರಾಜನ್ ಅವರ ಇಂದಿರಾ ಬ್ರಿಗೇಡ್ ಕಟ್ಟಿದ ರೀತಿ. ಇಂದಿರಾ ಬ್ರಿಗೇಡ್ ಯಾಕೆ ಬೇಕು? ಹಿಂದೊತ್ತು ಕಾಲವಿತ್ತು ಇಂದಿರಾ ಎಂದರೆ ಇಂಡಿಯಾ ಇಂಡಿಯಾ ಎಂದರೆ ಇಂದಿರಾ! ಅರಸ್ ಅವರ ತತ್ವ ಸಿದ್ದಾಂತಗಳೇನು? ಇದು ಇತಿಹಾಸ ಆದರೆ, ಚಿತ್ರದಲ್ಲಿ ಜಯರಾಜ್ ಪಾತ್ರ ಮಾಡಿದ ಡಾಲಿ […]

ಇಂಡಿಯಲ್ಲಿ ಪಕ್ಷದ ಸಂಘಟನೆ ಜೋರಾಗಿದೆ.. ಕಾರ್ಯಕರ್ತರಿಗೆ ಹುಮ್ಮಸ್ಸು ತುಂಬುತ್ತಾ ಮುನ್ನುಗ್ಗುತ್ತಿರುವ ದಯಾಸಾಗರ ಪಾಟೀಲ್ರು .

೩೦ ವರ್ಷಗಳ ಚುನಾವಣೆ ಇತಿಹಾಸ ತಗೆದು ನೋಡಿದರೆ, ಇಂಡಿಯಲ್ಲಿ ಎಲ್ಲ ಅಭ್ಯರ್ಥಿಗಳು ಚುನಾವಣೆ ಬಂದಾಗ ಬಂದು, ಸೋತು ಹೋದರೇ ಮತ್ತೆ ಬರುವುದು ಚುನಾವಣೆಗೆ ಟಿಕೆಟ್ ಸಿಕ್ಕರೆ ಮಾತ್ರ! ಹಿಂದೆ ವಿಠ್ಠಲ್ ಕಟಕದೊಂಡ ಬಳ್ಳೊಳ್ಳಿ ಮಾತ್ರಕ್ಷೇತ್ರವಿದ್ದಾಗ ಅವರಿಗೆ ಚುನಾವಣೆಯಲ್ಲಿ ೨೦೦ ಮತಗಳು ಬಂದರೂ ಕ್ಷೇತ್ರದ ಪ್ರವಾಸ ಮಾತ್ರ ನಿರಂತರ! ಆದರೆ ಬೇರೆ ಅಭ್ಯರ್ಥಿಗಳನ್ನು ನೋಡಿದರೆ, ಸೋತು ಹೋದ ನಂತರ ಮತ್ತೆ ಮತದಾರರನ್ನು ಬೇಟಿಯಾಗುವದನ್ನೇ ಮರೆಯುತ್ತಿದ್ದರು. ಆದರೆ ೨೦೧೮ರಲ್ಲಿ ಬಿಜೆಪಿ […]

೨೦೧೪ರಲ್ಲಿ ಎದ್ದಿದ್ದ ಸುನಾಮಿ ಇನ್ನೂ ಇದೆಯಾ? ಕಾರ್ಯಕರ್ತರಲ್ಲಿ ಆದ ಬದಲಾವಣೆಗಳು ಏನು? ಬಿಜೆಪಿ ಹೇಗೆ ಎದುರಿಸುತ್ತೆ?

ಯುವಕರ ಉತ್ಸಾಹ:- ಯಾವದೇ ಚುನಾವಣೆ ನಡೆದರೂ ಊರಿಗೆ ಹೋಗಿ ಮತ ಹಾಕುವ ನಾನು, ೨೦೧೪ರಲ್ಲಿ ಬೆಂಗಳೂರಿನಿಂದ ಇಂಡಿಯ ಸ್ಟೇಷನ್ ವರೆಗೆ ಹೋಗಿ , ಅಲ್ಲಿಂದ ಊರಿಗೆ ಹೋಗಿ ಮತ ಹಾಕುವದಕ್ಕಾಗಿ ಟ್ರೈನ್ ಟಿಕೆಟ್ ಬುಕ್ ಮಾಡಿದ್ದೆ. ಸ್ಟೇಷನ್ ಹತ್ತಿರ ಹೋಗಿ ನೋಡಿದರೆ ಯುವಕರ ದಂಡು! ಇಷ್ಟೊಂದು ಜನ ಯಾಕೆ ಎಂದು ಸಮೀಪ ಹೋಗಿ ನೋಡಿದರೆ, ಬೋಲೋ ಭಾರತ ಮಾತಾಕಿ ಜೈ! ಜೈ ನರೇಂದ್ರ ಮೋದಿಜಿ, ಜೈ ಯಡಿಯೂರಪ್ಪ […]

ಸುನಿಲ್ ಶೆಟ್ಟಿ ಒಬ್ಬ ನಟರು ಹೌದು, ವ್ಯಾಪಾರಿಯು ಹೌದು! ಅವರ ಯಶಸ್ವಿನ ಗುಟ್ಟುಗಳು..

ಬೇಗನೆ ಪ್ರಾರಂಭಿಸಿ – ನಾನು ಸಾಮಾನ್ಯವಾಗಿ ಬೆಳಿಗ್ಗೆ 5 ಗಂಟೆಗೆ ಎದ್ದೇಳುತ್ತೇನೆ. ನಾನು ನನ್ನ ಬೆಳಿಗ್ಗೆ ನನ್ನ ಆತ್ಮಕ್ಕೆ ಒಳ್ಳೆಯದನ್ನು ಮಾಡುತ್ತೇನೆ – ಯೋಗ, ಅಮ್ಮನೊಂದಿಗೆ ಚಾಯ್, ಕುಟುಂಬದೊಂದಿಗೆ ಸಮಯ, ಮತ್ತು ನನ್ನ ನಾಯಿಗಳು! ಮನೆಯಿಂದ ಹೊರಡುವ ಸಮಯ ಬರುವವರೆಗೆ ನಾನು ಗ್ಯಾಜೆಟ್‌ಗಳು ಅಥವಾ ಪರದೆಗಳನ್ನು ತಪ್ಪಿಸಲು ಪ್ರಯತ್ನಿಸುತ್ತೇನೆ. ಇದು ನನಗೆ ಏಕೆ ಕೆಲಸ ಮಾಡುತ್ತದೆ? ಸರಳ. ಬೆಳಿಗ್ಗೆ 8 ಗಂಟೆಗೆ, ನಾನು ಈಗಾಗಲೇ ದಿನವನ್ನು ಗೆದ್ದಿದ್ದೇನೆ […]

ಯಾರೂ ನಿರೀಕ್ಷೆ ಮಾಡದ ಜವಾಬ್ದಾರಿ, ವರಿಷ್ಠರ ನಿರ್ಧಾರ ಯಡಿಯೂರಪ್ಪನವರಿಗೆ ಮತ್ತು ಕಾರ್ಯಕರ್ತರಿಗೆ ಭರಪೂರ ಹುಮ್ಮಸ್ಸು ತುಂಬಿದೆ!

ವಯಸ್ಸಿನ ಮಿತಿ ಬಿಎಸ್ವೈಗೆ ಇಲ್ಲ! ಕೇಂದ್ರ ಸಂಸದೀಯ ಮಂಡಳಿ ಉನ್ನತ ಮಟ್ಟದ ಸಮಿತಿ. ಅದರಲ್ಲೂ ಆಳುವ ಪಕ್ಷದ ಸಂಸದೀಯ ಮಂಡಳಿಗೆ ಇನ್ನೂ ಮಹತ್ವ ಹೆಚ್ಚು! ಪಕ್ಷದ ಎಲ್ಲ ದೊಡ್ಡ ದೊಡ್ಡ ನಿರ್ಧಾರಗಳು ಇದೆ ಮಂಡಳಿ ನಿರ್ಧಾರ ಮಾಡುತ್ತೆ. ಅಂತಹ ಒಂದು ಮಂಡಳಿಯಲ್ಲಿ ಸ್ಥಾನ ಪಡೆಯೋದು ಎಲ್ಲರಿಗೂ ಅಸಾಧ್ಯ! ಇತಿಹಾಸ ತಿರುವಿ ಹಾಕಿ ನೋಡಿದರೆ ಪಕ್ಷದ ಕಟ್ಟಾಳು, ನಿಷ್ಠೆ, ಪ್ರಾಮಾಣಿಕ ಕಾರ್ಯಕರ್ತರಿಗೆ ಸ್ಥಾನ ಸಿಕ್ಕಿದೆ. ಕರ್ನಾಟಕದ ಬಿಜೆಪಿ ಪಕ್ಷದಿಂದ […]

ಉತ್ಸವ ಹುಟ್ಟಿದ್ದು ಪಕ್ಷದಲ್ಲಿ ನಾನೆಷ್ಟು ಶಕ್ತಿಶಾಲಿ? ಸಾಕ್ಸಿಯಾಗಿದ್ದು ಒಗ್ಗಟ್ಟಿನ ಮಂತ್ರಕ್ಕೆ! ಚುನಾವಣೆಗೆ ದಿಕ್ಸೂಚಿನಾ?

By Bhimashankar Teli ಜನಪ್ರಿಯ ನಾಯಕರು:- ರಾಜ್ಯದಲ್ಲಿ ದೇವೇಗೌಡರು, ಯಡಿಯೂರಪ್ಪನವರು ಮತ್ತು ಸಿದ್ದರಾಮಯ್ಯನವರು ಜನಪ್ರಿಯ ನಾಯಕರು. ಈಗಿನ ಎಲ್ಲ ರಾಜಕಾರಣಿಗಳು , ಎಲ್ಲ ಪಕ್ಷದ ಕಾರ್ಯಕರ್ತರು ಇವರಿಗೆಲ್ಲ ಮರ್ಯಾದೆ ಕೊಡುವುದು ನಾವು ಕಂಡಿದ್ದೇವೆ. ಇದಕ್ಕೆ ಮುಖ್ಯ ಕಾರಣ ಇವರೆಲ್ಲ ಅಧಿಕಾರದಲ್ಲಿ ಇದ್ದಾಗ ಕೆಲವೊಂದು ಒಳ್ಳೆಯ ಕೆಲಸಗಳು ರಾಜ್ಯಕ್ಕೆ ಆಗಿವೆ. ಇವರು ಬಡವರ, ದೀನದಲಿತರ ಏಳಿಗೆಗಾಗಿ ಒಂದಿಷ್ಟು ಶ್ರಮವೂ ಹಾಕಿದ್ದಾರೆ ಮತ್ತು ದೇಶದಲ್ಲಿ ನಮ್ಮ ರಾಜ್ಯಕ್ಕೆ ಅನ್ಯಾಯವಾದಾಗ ತಲೆ […]

ನಮ್ಮ ಕಡತಗಳು ಯಾಕೆ ಮಾತೃಭಾಷೆಯಲ್ಲಿ ಇರಬೇಕು, ಯಾಕೆ ನಾವು ಭಾಷೆಗಾಗಿ ಹೋರಾಡಬೇಕು?

By Bhimashankar Teli ನಮ್ಮ ದೇಶದಲ್ಲಿ ಭಾಷೆಯ ಸಮಸ್ಯೆ ಎಂದಿಗಿಂತಲೂ ಇಂದು ಸ್ವಲ್ಪ ಜಾಸ್ತಿನೇ ಇದೆಯಾ? ಇದು ನಿಜವಾಗಿ ಜನರ ಸಮಸ್ಯೆನಾ ಅಥವಾ ರಾಜಕೀಯ/ನಾಯಕರ/ಪುಡಾರಿಗಳ ಒಳಆಟವಾ? ಇದಕ್ಕೆ ನೇರವಾಗಿ ಉತ್ತರ ಹೇಳದೆ ಹೋದರು ನನ್ನ ಅಭಿಪ್ರಾಯ ಖಂಡಿತ ವ್ಯಕ್ತಪಡಿಸುತ್ತೇನೆ. ಕಾರಣ ನನಗೆ ನನ್ನ ಮಾತೃಭಾಷೆ ಬಹಳ ಮುಖ್ಯ ಮತ್ತು ಬೇರೆ ಭಾಷೆಗಳಿಗೆ ಗೌರವ ಕೊಡುವ ಜಾಯಮಾನ ನನ್ನದು. ನಾಯಕರಿಗೂ ತಮ್ಮ ಭಾಷೆ ಮುಖ್ಯ ಅಂತಾನೆ ಹೋರಾಟಕ್ಕೆ ದುಮಿಕಿರುತ್ತಾರೆ. […]

ರಕ್ಷಿತ್ ಶೆಟ್ಟಿಯ “೭೭೭ ಚಾರ್ಲಿ” ಪ್ರೀಮಿಯರ್ ಷೋನಲ್ಲಿ ಜೈ ಹೊ.

ಮನುಷ್ಯತ್ವದ ಪಾಠವನ್ನು ಹೇಳಿದ ಹಾಗೆ ಚಾರ್ಲಿ ಸಿನಿಮಾದಲ್ಲಿ ಕಾಣಬಹದು. ವಿವಿಧ ನಗರಗಳಲ್ಲಿ ಚಾರ್ಲಿ ಶೋ ಜನರು ನೋಡಿ ಇದೊಂದು ಉತ್ತಮ ಚಿತ್ರ ಮತ್ತು ನಾಯಿಗಳನ್ನು ಪ್ರೀತಿಸುವವರು ನೋಡಬಹುದು ಮತ್ತು ಮನುಷ್ಯತ್ವ ಇದ್ದವರು ನೋಡಲೇಬೇಕು ಅಂತೇ! ಪ್ರಾಣಿ ಧರ್ಮನ ಜೀವನದಲ್ಲಿ ಹೇಗೆ ಭಾವನೆಗಳನ್ನು ಹುಟ್ಟಾಕುತ್ತದೆ ಎಂದು ಅಚ್ಚುಕಟ್ಟಾಗಿ ತೋರಿಸಿದ್ದಾರೆ. ಅನೇಕರ ಇದರ ಬಗ್ಗೆ ವಿಮರ್ಶೆ ಮಾಡಿದ್ದಾರೆ ಆದರೆ ಅದನ್ನು ಇಲ್ಲಿ ಹೇಳುವುದಕ್ಕೆ ಹೋಗುವದಿಲ್ಲ ಕಾರಣ ನಾನು ಇನ್ನು ಚಿತ್ರ […]

ಜನಪ್ರಿಯ ನಾಯಕ ವಿಜಯೇಂದ್ರರ ದಾಳಗಳು ಪ್ರಖರವಾಗಿರಲೇಬೇಕು!. ಮೋದಿ ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿದ್ದು ಜನಪ್ರಿಯತೆ ಮೇಲೇನೆ?

ಚಾಣಕ್ಯನ ಪ್ರಕಾರ ನಿಮಗೆ ವಿರೋಧಿಗಳಿದ್ದರೇ ಅವರನ್ನು ಸದೆಬಡಿದರೆ ಮಾತ್ರ ನಿಶ್ಚಿಂತೆಯಾಗಿ ರಾಜ್ಯಬಾರ ಮಾಡಬಹುದು. ಎರಡು ಕಡೆಯಿಂದ ತರ್ಕ ಬದ್ದ ಯೋಜೆನೆಗಳು ಇರುತ್ತವೆ. ಆದರೆ ಇಲ್ಲಿ ಗಟ್ಟಿಯಾಗಿ ಯಾರು ದಾಳಗಳು ಉರಳಿಸುತ್ತಾರೋ ಅವರು ಗೆಲ್ಲುತ್ತಾರೆ. ವಿರೋಧಿಗಳು ಒಳಗು ಇರಬಹುದು ಅಥವಾ ಹೊರಗೂ ಇರಬಹುದು! ರಾಮಾಯಣದಲ್ಲಿ ರಾಮ ವನವಾಸಕ್ಕೆ ಹೋಗಿದ್ದು ಯಾವ ಕಾರಣಕ್ಕೆ? ಮಹಾಭಾರತದಲ್ಲಿ ಕೌರವರ ಮತ್ತು ಪಾಂಡವರ ನಡುವಿನ ಯುದ್ಧವಾಗಿದ್ದು ಯಾವ ಕಾರಣಕ್ಕೆ? ಹೀಗೆ ಅನೇಕ ಉಧಾಹರಣೆಗಳು ಇತಿಹಾಸದಲ್ಲಿ […]

ರಾಷ್ಟ್ರೀಯ ಸ್ವಯಂ ಸೇವಕ ಸಂಘ. ರಾಷ್ಟ್ರೀಯತೆಯನ್ನು ಜಾಗೃತಗೊಳಿಸುವ ಶಾಲೆ!

ದೇಶದ ಸಂಸ್ಕೃತಿ ಬಗ್ಗೆ ತಿಳಿಸುವ ಏಕೈಕ ಸಂಘ! ಇವರೆಲ್ಲ ಶಿಸ್ತಿನ ಸೇವಕರು. ಸಂಘದ ವಿಸ್ತಾರ ಮತ್ತು ಅದರ ಕೆಲಸ ಊಹೆಗೂ ನಿಲುಕಲಾರದು. ನಾನು ಬರೆದದ್ದು ಅತಿ ಸ್ವಲ್ಪ. ಮತ್ತೊಮ್ಮೆ ಇನ್ನೊಂದು ಸರಣಿ ಮೂಲಕ ಬರುತ್ತೇನೆ. ಸ್ವಾಮಿ ವಿವೇಕಾನಂದರು ೧೮೮೩ರಲ್ಲಿ ಚಿಕಾಗೋ ಸಮ್ಮೇಳನದಲ್ಲಿ ಅಮೇರಿಕಾದ ಅಣ್ಣ ತಮ್ಮಂದಿಯರೇ, ಅಕ್ಕ ತಂಗಿಯರೇ ಎಂದು ಹೇಳಿದ ಮಾತುಗಳೇ ಹೆಚ್ಚಿನ ಜನರಿಗೆ ನೆನೆಪಿದೆ ಆದರೆ ಅಂದು ನಿಜವಾಗಿ ಏನೆಲ್ಲ ನಡೆಯಿತು ಎಂದು ಸಂಪೂರ್ಣ […]

ದರ್ಶನ, ಸುದೀಪ್ , ಯಶ್ ಇದರಲ್ಲಿ ಯಾರು ಗ್ರೇಟ್? ಯಾರು ಬಾಸ್ ?

ಒಬ್ಬರು ನಾ ಬಂದ್ರೆ ನಂದೇ ಹವಾ, ಇನ್ನೊಬ್ಬರು ಇದು ಸ್ವಂತ ಬ್ರಾಂಡ್ ಕಣೋ ಹೀಗೆ ಕನ್ನಡಿಗರಿಂದ ಬೆಳೆದ ನಾಯಕರೆಲ್ಲರೂ ಕೌಂಟರ್ ಡೈಲಾಗ್ ಹೊಡೆಯುತ್ತ ಅಭಿಮಾನಿಗಳನ್ನು ರಂಜಿಸುತ್ತಾ ದುಡ್ಡನ್ನು ಮಾಡುವುದು ನಾವೆಲ್ಲಾ ನೋಡಿದ್ದೇವೆ. ದುಡ್ಡು ಮಾಡುತ್ತಾ ಅನೇಕ ಸಂದೇಶಗಳನ್ನು , ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಅಭಿಮಾನಿಗಳ ಋಣವನ್ನು ತೀರಿಸುವ ಸಣ್ಣ ಪ್ರಯತ್ನ ನಿರಂತರವಾಗಿ ಮಾಡುತ್ತಾರೆ. ಹಾಗಂದ ಮಾತ್ರಕ್ಕೆ ಇವರೆಲ್ಲ ದೇವರುಗಳಲ್ಲ. ಆದರೆ ಇವರ ಬಗ್ಗೆ ಒಂದು ಹೆಮ್ಮಯ […]

“ಕೆರೆಮನೆ ಹೋಂಸ್ಟೇ ನಮ್ಮ ಅನುಭವ”

By Bhimashankar Teli Contact:9845813288 ಕೆರೆಮನೆ ಎಸ್ಟೇಟ್, ಪೊಣ್ಣಪೇಟೆ — ಇದು ನೋಡಲು ತುಂಬಾ ಚೆನ್ನಾದ ಸ್ಥಳ. ಇಲ್ಲಿನ ಹೋಮ್ ಸ್ಟೇ ಗಳು ಅತ್ಯುತ್ತಮವಾದವುಗಳಲ್ಲಿ ಒಂದು. “ಕೆರೆಮನೆ” ಎಂದು ಹೆಸರಿಸಲು ಒಂದು ಮುಖ್ಯ ಕಾರಣವಿದೆ — ಇಲ್ಲಿ ಒಂದು ದೊಡ್ಡ ಕೆರೆ (ಹಿರಿದಾದ ಹಳ್ಳಕೋಲು) ಇದೆ. ಅದರಿಂದ ಈ ಹೋಮ್ ಸ್ಟೇಗೆ “ಕೆರೆಮನೆ” ಎಂಬ ಹೆಸರು ಬಂದಿದೆ. ಇಲ್ಲಿ ಸುಂದರವಾದ ಸಿಟ್ ಔಟ್ ಇದ್ದು, ಸುತ್ತಮುತ್ತ ಹಸಿರಿನ […]